ಜಿನವಲ್ಲಭ
ಕನ್ನಡ ಸಾಹಿತ್ಯದಲ್ಲಿ ಈ ಹೆಸರಿನ ಇಬ್ಬರು ಬರುತ್ತಾರೆ. ಒಬ್ಬ ಮಹಾಕವಿ ರನ್ನನ ತಂದೆ. ಈತನ ಬಗೆಗೆ ಹೆಚ್ಚೇನು ತಿಳಿದು ಬರುವುದಿಲ್ಲ.

	ಇನ್ನೊಬ್ಬ ಪಂಪನ ತಮ್ಮ. ಈತ ದೊಡ್ಡ ಕವಿಯೂ ವಿದ್ವಾಂಸನೂ ಆಗಿದ್ದನೆಂದು ತಿಳಿದುಬರುತ್ತದೆ. ಈತನಿಗೆ ವಾಗ್ವಧೂವರವಲ್ಲಭ ಎಂಬ ಬಿರುದಿತ್ತು.
 ಚದುರಮೆಯ್ಮೆಯ ಸತ್ಕವಿತ್ವದ ಸಂದ ಪಂಪನ ತಮ್ಮನೋ |	
 ವ್ರ್ವದೆ ಪೊಗಯ ಬಾಜಿಸಲ್ಬರೆಯಲ್ಕವಿತ್ವದ ತತ್ವದೋ |
 ಳ್ಪುದಿದು ನೇರ್ಪಡೆ ಪೇಲುವ್ರ್ವಿಗಪೂವ್ರ್ವಮಾಗಿರೆ ಬಲ್ಲೊನ |
 ಪ್ಪುದನೋವ್ರ್ವನೆ ವಾಗ್ವಧೂವರವಲ್ಲಭಂ ಜಿನವಲ್ಲಭಂ ||
 	(ಗಂಗಾಧರ ಶಾಸನ)

	ಈತ ತನ್ನ ಬಗೆಗೆ ಆ ಶಾಸನದಲ್ಲಿ ಹೀಗೆ ಹೇಳಿಕೊಂಡಿದ್ದಾನೆ : ವೆಂಗಿನಾಡ ಸಪ್ತಗ್ರಾಮಗಳಲ್ಲಿನ ವಂಗಪಂದ (ವೆಂಗಪ) ಕಮ್ಮೆ ಬ್ರಾಹ್ಮಣ ಶ್ರೀವತ್ಸಗೋತ್ರದ ನಿಡುಂಗೊಂಡೆಯ ಭವ್ಯರತ್ನಾಕರನಾದ ಅಭಿಮಾನಚಂದ್ರನ ಮೊಮ್ಮಗ ಭೀಮಪಯ್ಯ (ತನಗೆ) ತಂದೆ; ಅಣ್ಣಿಗೆರೆಯ ಜೋಯಿಸ ಸಿಂಘನ ಮೊಮ್ಮಗಳಾದ ಅಬ್ಬಣಬ್ಬೆ ತಾಯಿ; ಪಂಡರಂಗಪಲ್ಲಿಯ ಜಯಣಂದಿ ಸಿದ್ಧಾಂತ ಭಟಾರರ ಶಿಷ್ಯ-ತಾನು; ಸಂಸಾರಿ; ಗೀತೆಗಳನ್ನು ಹಾಡುವುದರಲ್ಲೂ ಕಾವ್ಯಗಳನ್ನು ಓದುವುರಲ್ಲೂ ಕವಿತೆ ರಚಿಸುವುದರಲ್ಲೂ ನಿಷ್ಣಾತ. ಈತನಿಗೆ ಕನ್ನಡ, ಸಂಸ್ಕøತ ಮತ್ತು ತೆಲುಗು ಭಾಷೆಗಳು ಬರುತ್ತಿದ್ದುವು. 
(ನೋಡಿ- ಗಂಗಾಧರ-ಶಾಸನ)								(ಎಸ್.ಎಸ್.ಜೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ